Home Jokes | ಜೋಕ್ಸ್ Kannada Typing Mallige Rate | ಮಲ್ಲಿಗೆ ದರ Contact

Welcome to Wingding.Website

Gade Mathu | ಗಾದೆ ಮಾತು

1

ಅತಿಯಾಗಿ ಮಾತನಾಡಿದರೆ ವಿವಾದ.. ಅನಾವಶ್ಯಕವಾಗಿ ಮಾತನಾಡಿದರೆ ಅವಮಾನ.. ಅವಶ್ಯಕತೆ ಇದ್ದಷ್ಟೇ ಮಾತನಾಡಿದರೆ ಗೌರವ. ಎಲ್ಲರೂ ಬಹಳ ಪ್ರೀತಿಯ ಮಾತನ್ನಾಡುತ್ತಾರೆ, ಅದರೆ ಪ್ರಪಂಚ ನಡೆಯುವುದು ಕೇವಲ ಅವಶ್ಯಕತೆಗಳ ಆಧಾರದ ಮೇಲೆ ಮಾತ್ರ.

Share On

2

ಬಿಟ್ಟು ಹೋದವರು ಮತ್ತೆ ಬಂದರೆಂದು ಖುಷಿಪಡದಿರಿ ಯಾಕೆಂದರೆ …… ಒಂದು ಬಾರಿ ಓದಿದ ಪುಸ್ತಕದ ಅಂತ್ಯ ಹೇಗಿದೆ ಎಂದು ನಮಗೆ ಅರಿತಿರುವಾಗ ಆ ಪುಸ್ತಕವನ್ನು ಎಷ್ಟೇ ಬಾರಿ ಓದಿದರೂ ಅದರ ಅಂತ್ಯ ಒಂದೇ ಆಗಿರುತ್ತದೆ…! .....ತಪ್ಪುಗಳನ್ನು ಕ್ಷಮಿಸ ಬಹುದು, ಆದರೆ ಮೋಸವನ್ನಲ್ಲ.....

Share On

3

ಅದೃಷ್ಟ ನಮ್ಮ ಕೈಯಲ್ಲಿ ಇರುವುದಿಲ್ಲ ಕೇವಲ ತೀರ್ಮಾನ ನಮ್ಮ ಕೈಯಲ್ಲಿ ಇರುತ್ತದೆ. ನಾವು ತೆಗೆದುಕೊಳ್ಳುವ ತೀರ್ಮಾನವೇ ನಮ್ಮ ಅದೃಷ್ಟವನ್ನು ತೀರ್ಮಾನಿಸುತ್ತದೆ. ಬೆಲೆಯಿಲ್ಲದ ಜಾಗದಲ್ಲಿ ನೆಲೆ ಕಾಣಬೇಡಿ, ಪ್ರೀತಿ ಇಲ್ಲದ ಜಾಗದಲ್ಲಿ ಆಶ್ರಯ ಕೇಳಬೇಡಿ.

Share On

4

ಜೀವನವೂ ಬರಿ ಕಷ್ಟ ನೋವುಗಳಿಂದ ಕೂಡಿದೆ ಎಂದು ಕುಗ್ಗದಿರಿ, ಒಂದಲ್ಲ ಒಂದು ದಿನ ನಮ್ಮ ಜೀವನದಲ್ಲೂ ಕೂಡ ಸಂತೋಷ ದಿನಗಳು ಬರಲಿದೆ ಎಂಬ ವಿಶ್ವಾಸದೊಂದಿಗೆ ಬದುಕಬೇಕು. ನಮ್ಮ ಕಷ್ಟದ ಸಮಯದಲ್ಲಿ ಸ್ಪೊರ್ತಿ ತುಂಬುವ ಒಂದು ಜೀವ ನಮ್ಮೊಂದಿಗಿದ್ದರೆ ಅಸಾದ್ಯವೂ ಸಾದ್ಯವಾಗುತ್ತದೆ....

Share On

5

ನೀವು ಯೋಚಿಸದೆ ಹೇಳುವ ಮಾತು, ನಿಮ್ಮನ್ನು ಒಂದೊಂದು ನಿಮಿಷ ಯೋಚಿಸುವಂತೆ ಮಾಡುತ್ತದೆ. ಆದ್ದರಿಂದ ಯೋಚಿಸಿ ಮಾತನಾಡಿ. ತಾಳ್ಮೆ ಎನ್ನುವುದು ಬಲಹೀನತೆಯಲ್ಲ, ಅದೊಂದು ಶಕ್ತಿ, ಅದು ಎಲ್ಲರ ಬಳಿ ಇರುವುದಿಲ್ಲ”

Share On

6

ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ... ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲೂ ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ. ಪ್ರಪಂಚವು ಬಹಳಷ್ಟು ವಿಶಾಲವಾಗಿದೆ ಒತ್ತಾಯವಾಗಿ ಯಾರ ಜೊತೆಗೂ ಬದುಕುವ ಪ್ರಯತ್ನ ಮಾಡಬೇಡಿ, ಏಕೆಂದರೆ ನಿಮ್ಮನ್ನು ಗೌರವಿಸುವವರು ನಿಮ್ಮನ್ನೇ ಹುಡುಕಿಕೊಂಡು ಬರುತ್ತಾರೆ, ಅವರಿಗೆಂದೂ ಮೋಸ ಮಾಡದಿರಿ, ಸ್ನೇಹ, ಪ್ರೀತಿ ಕಳೆದುಕೊಳ್ಳದಿರಿ.

Share On

7

ನೆಮ್ಮದಿಯಾಗಿ ಇರಬೇಕೆಂದರೆ ನಾವು ಇನ್ನೊಬ್ಬರ ವಿಷಯಕ್ಕೆ ಕಿವಿಕೊಡದೆ, ಮತ್ತೊಬ್ಬರು ನಮ್ಮ ಬಗ್ಗೆ ಏನೇ ಮಾತಾಡಿದರೂ ತಲೆ ಕೆಡಿಸಿಕೊಳ್ಳಬೇಡಿ. ಸಮಾಜದಲ್ಲಿ ಒಬ್ಬ ಬಡವ ನೂರು ಸತ್ಯ ಹೇಳಿದರೂ ಯಾರು ನಂಬಲ್ಲ..... ಆದರೆ ಅದೇ ಒಬ್ಬ ಶ್ರೀಮಂತ ಒಂದು ಸುಳ್ಳು ಹೇಳಿದರೆ ಸಾಕು ಎಲ್ಲರೂ ನಂಬುತ್ತಾರೆ.... ಹಣಕ್ಕೆ ಇರುವ ಬೆಲೆ.. ಬಡವನ ಗುಣಕ್ಕೆ ಇಲ್ಲಾ...

Share On

8

ವಿದ್ಯೆ ಇದ್ದರೇನಂತೆ ವಿವೇಕ ಇಲ್ಲದಿದ್ದರೆ, ಹಣ ಇದ್ದರೇನಂತೆ ಗುಣ ಇಲ್ಲದಿದ್ದರೆ, ಪ್ರಾಣ ಇದ್ದರೇನಂತೆ ತ್ರಾಣ ಇಲ್ಲದಿದ್ದರೆ, ಗುರು ಇದ್ದರೇನಂತೆ ಅರಿವೇ ಇಲ್ಲದಿದ್ದರೆ, ರೂಪ ಇದ್ದರೇನಂತೆ ಮಾನ ಇಲ್ಲದಿದ್ದರೆ, ಸುಖ ಇದ್ದರೇನಂತೆ ಶಾಂತಿ ಇಲ್ಲದಿದ್ದರೆ, ಏನಿದ್ದರೇನಂತೆ ಮಾನವೀಯತೆ ಇಲ್ಲದಿದ್ದರೆ.

Share On

9

ಮೋಸ ಮಾಡಿ ಸಂಪಾದನೆ ಮಾಡಿದ ಹಣದಲ್ಲಿ, ಸ್ವಲ್ಪ ಹಣ ಪುಣ್ಯದ ಕಾರ್ಯಕೆ ವಿನಿಯೋಗ ಮಾಡಿದಲ್ಲಿ, ಆ ಪುಣ್ಯದ ಫಲ ಮೋಸ ಹೋದವರಿಗೆ ಸೇರುತದೆ.... ಹೊರುತು ಮೋಸ ಮಾಡಿದವರಿಗಲ್ಲ. ....ಮೋಸ ಮಾಡಿದವರಿಗೆ ಪಾಪದ ಫಲ ಕಟ್ಟಿಟ್ಟ ಬುತ್ತಿ....

Share On

10

ಒಂದು ಸಣ್ಣ ಮಾತು ಮನಸ್ಸನ್ನು ಗಾಯಗೊಳಿಸುತ್ತೆ. ಒಂದು ಸಣ್ಣ ಸುಳ್ಳು ಸ್ನೇಹವನ್ನೇ ದೂರ ಮಾಡುತ್ತೆ. ಒಂದು ಸಣ್ಣ ಅವಮಾನ ಸಂಬಂಧಗಳನ್ನೇ ದೂರ ಮಾಡುತ್ತೆ, ಕಾರಣ ಸಣ್ಣದ್ದೇ ಇರಬಹುದು ಪರಿಣಾಮ ದೊಡ್ಡದಾಗಿರುತ್ತೆ.

Share On

11

ಜೀವನದಲ್ಲಿ ಬರುವುದೆಲ್ಲವ ಸ್ವೀಕರಿಸಬೇಕು, ಬಂದದ್ದೆಲ್ಲವ ಅನುಭವಿಸ*ಬೇಕು, ನಮ್ಮ ಪಾಲಿನದಷ್ಟೇ ನಮಗೆ ಸಿಗುವುದು, ನಮ್ಮದಲ್ಲದ್ದು ನಮ್ಮಿಂದ ಖಂಡಿತಾ ದೂರಾಗುವುದು, ಇರುವಷ್ಟು ದಿನ ನೆಮ್ಮದಿಯಾಗಿರಬೇಕು. ಇಷ್ಟೇ ಜೀವನ.

Share On

12

ಅನುಮಾನ ಮತ್ತು ಅಹಂಕಾರ ಇವೆರಡೂ ಭಯಂಕರವಾದ ಮಾನಸಿಕ ರೋಗಗಳು. ಈ ರೋಗ ಬಂದವರು ತಾವು ಸಂತೋಷವಾಗಿರುವುದಿಲ್ಲ, ಮತ್ತು ಇತರರನ್ನು ಸಂತೋಷದಿಂದ ಇರಲು ಬಿಡುವುದಿಲ್ಲ.

Share On

13

ಜೀವನದಲ್ಲಿ ಯಾರು ಯಾರಿಗೂ ಅನಿವಾರ್ಯವಲ್ಲ ಸ್ವಲ್ಪ ಜನ ನಮ್ಮನ್ನು ಇಷ್ಟಪಡುತ್ತಾರೆ. ಇನ್ನು ಸ್ವಲ್ಪ ಜನ ಇಷ್ಟ ಪಟ್ಟಂತೆ ನಟಿಸುತ್ತಾರೆ. ಇನ್ನು ಕೆಲವರು ಅವರ ಅವಶ್ಯಕತೆಗೆ ನಮ್ಮನ್ನು ಬಳಸಿಕೊಳ್ಳುತ್ತಾರೆ. “ಭವಿಷ್ಯವನ್ನು ರೂಪಿಸುವುದು ಭರವಸೆಗಳೇ ಹೊರತು ಭಯಗಳಲ್ಲ, ಭಯ ಕೇವಲ ಭ್ರಮೆಯಷ್ಟೇ.”

Share On

14

ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು, ಹಾಗೆಯೇ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು. “ಕಾರಿನಲ್ಲಿ ಓಡಾಡಿದರೆ ಪ್ರಪಂಚ ನಿನ್ನ ನೋಡಬಹುದು.... ಕಾಲ್ನಡಿಗೆಯಲ್ಲಿ ಓಡಾಡಿ ನೋಡು ಪ್ರಪಂಚವನ್ನೇ ನೀ ನೋಡಬಹುದು”

Share On

15

ಜ್ಞಾನವೆಂಬ ಸಂಪತ್ತು, ತಾಳ್ಮೆಯೆಂಬ ಆಯುಧ, ಜೊತೆಗೆ ನಗುವಿನಂಥ ಶಕ್ತಿವರ್ಧಕ ಹೊಂದಿದವರನ್ನು ಯಶಸ್ಸು ಎಲ್ಲಾ ದಿಕ್ಕುಗಳಿಂದ ಬಂದು ಸೇರುತ್ತದೆ. “ನೋಯಿಸಿ ಪಡೆಯುವ ಖುಷಿ ನರಕಕ್ಕೆ ಸಮಾನ, ನೋವಿನಲ್ಲಿ ನಗಿಸಿ ಪಡೆಯುವ ಖುಷಿ ಸ್ವರ್ಗಕ್ಕೆ ಸಮಾನ”

Share On

16

ಕನಸು ನೂರಾರು ಇದ್ದರೇನು? ಮನಸು ಒಂದೇ ಇರಲಿ, ಯೋಚನೆ ಸಾವಿರ ಇದ್ದರೇನು? ಗುರಿ ಒಂದೇ ಇರಲಿ, ಸುಖ ದುಃಖ ಏನೇ ಇರಲಿ! ಮುಖದಲ್ಲಿ ಸದಾ ನಗು ತುಂಬಿರಲಿ. ನಮಗೆ ಎರಡು ರೀತಿಯ ಶಿಕ್ಷಣ ಬೇಕು, ಮೊದಲನೆಯದು- ಜೀವನವನ್ನು ಹೇಗೆ ಮಾಡಬೇಕೆಂದು ಕಲಿಸುವುದು, ಎರಡನೆಯದು- ಹೇಗೆ ಬದುಕಬೇಕೆಂದು ಕಲಿಸುವುದು.

Share On

17

ಸಂಸ್ಕಾರ ಇಲ್ಲದವನ ನಮಸ್ಕಾರದಲ್ಲಿ, ಯಾವ ಪುರಸ್ಕಾರವು ದೊರೆಯುವುದಿಲ್ಲ. ತಾಯಿ ಮತ್ತು ಹೆಂಡತಿಯನ್ನು ಅಳತೆ ಮೀರಿ ಪ್ರೀತಿಸಿ ಗೌರವಿಸಿ, ಏಕೆಂದರೆ ಒಬ್ಬರು ಪ್ರಪಂಚಕ್ಕೆ ಕರೆ ತಂದವರು, ಇನ್ನೊಬ್ಬರು ಈ ಪ್ರಪಂಚವನ್ನೇ ಮರೆತು ನಿಮ್ಮನ್ನು ನಂಬಿ ಬಂದವರು. ಹೆಣ್ಣನ್ನು ರಕ್ಷಿಸಿ, ಹೆಣ್ಣನ್ನು ಗೌರವಿಸಿ...

Share On

18

ಉತ್ತಮ ಸ್ನೇಹಿತರು ಕನ್ನಡಿ ಮತ್ತು ನೆರಳು ಇದ್ದಂತೆ, ಕನ್ನಡಿ ಎಂದೂ ಸುಳ್ಳು ಹೇಳಲ್ಲ, ನೆರಳು ಎಂದಿಗೂ ಬಿಟ್ಟು ಹೋಗಲ್ಲ. ಬಿಟ್ಟುಕೊಡಬೇಡ ಒಳ್ಳೆಯ ಸ್ನೇಹಿತರನ್ನು , ಮರಯಬೇಡ ನಿನ್ನ ಜೊತೆ ನಿಲ್ಲುವರನ್ನು , ತುಳಿಯಬೇಡ ಯರೊಬ್ಬರ ಬದುಕನ್ನು, ಕಳೆದುಕೊಳ್ಳಬೇಡ ನಿನ್ನ ವ್ಯಕ್ತಿತ್ವವನ್ನು.

Share On

19

ಮನಸ್ಸಿನಲ್ಲಿ ಕೆಟ್ಟ ಆಲೋಚನೆ ತುಂಬಿದ್ದಾಗ, ಒಳ್ಳೆಯದನ್ನು ಹೇಳುವವರು ಶತ್ರುಗಳಾಗಿ, ಕೆಟ್ಟದ್ದನ್ನು ಹೇಳುವವರು ಹಿತ್ತೈಷಿಗಳಾಗಿ ಕಾಣುತ್ತಾರೆ.

Share On

20

ಸುಳ್ಳು ಹೇಳುವವನು ಸಾವಿರ ಹೇಳುತ್ತಾನೆ ಏಕೆಂದರೆ ಅವನ ಹತ್ತಿರ ಸಾವಿರ ಕಥೆಗಳು ಇರುತ್ತವೆ. ನಿಜ ಹೇಳುವವನು ಒಂದೇ ವಿಷಯವನ್ನು ಪದೇ ಪದೇ ಹೇಳುತ್ತಾನೆ. ಏಕೆಂದರೆ ನಿಜ ಎನ್ನುವುದು ಒಂದು.

Share On

21

ಕಣ್ಣು ನಕ್ಕರೂ ಒದ್ದೆಯಾಗುತ್ತೆ, ಅತ್ತರೂ ಒದ್ದೆಯಾಗುತ್ತೆ, ಆದರೆ ನಗಸಿದವರು ನಾಲ್ಕು ದಿನ ನೆನಪಿನಲ್ಲಿರುತ್ತಾರೆ. ನೋಯಿಸಿದವರೂ ಜೀವನಪೂರ್ತಿ ನೆನಪಿನಲ್ಲಿರುತ್ತಾರ...

Share On

22

ಯಾರನ್ನು ಅತಿಯಾಗಿ ತಿದ್ದಲು ಹೋಗಬೇಡ ಮನವೇ, ಏಕೆಂದರೆ ಅಕ್ಷರ ತಿದ್ದಿದ್ದಷ್ಟು ಹಾಳೆಯೇ ಹರಿದು ಹೋಗುವದು. ಸಂತೋಷ ಬೇರೆಯವರಿಗಾಗಿ ಇರುತ್ತದೆ ಏಕೆಂದರೆ ಅದನ್ನು ಹಂಚಿಕೊಳ್ಳುತ್ತೇವೆ, ಆದರೆ ನೋವು ನಮ್ಮ ಸ್ವಂತದ್ದಾಗಿರುತ್ತದೆ ಏಕೆಂದರೆ ಅದನ್ನು ಎದೆಯಲ್ಲಿ ಮುಚ್ಚಿಟ್ಟುಕೊಳ್ಳುತ್ತೇವೆ.

Share On

23

‌ನಮ್ಮ ಬಾಯಿಗೆ ಹೋಗುವ ಆಹಾರ ಎಷ್ಟು ಶುದ್ಧವಾಗಿ ಬೇಕೋ ಹಾಗೆಯೇ, ನಮ್ಮ ಬಾಯಿಂದ ಹೊರ ಬರುವ ಮಾತುಗಳು ಅಷ್ಟೇ ಶುದ್ಧ ವಾಗಿರಬೇಕು, ಆಗ ಸ್ನೇಹ ಸಂಬಂಧಗಳು ಶುದ್ಧವಾಗಿರುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋಗು ಪ್ರತಿಫಲದ ಬಗ್ಗೆ ಯೋಚನೆ ಮಾಡಬೇಡ.... ನೀನು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಸತ್ಯ ಇದ್ದರೆ ಪ್ರತಿಫಲ ತಾನಾಗಿಯೇ ಒಲಿದು ಬರುತ್ತದೆ....!!!!!!!

Share On

24

ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು !! ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು !

Share On

25

ಕನಸಿಗೂ-ನನಸಿಗೂ ಒಂದೇ ವ್ಯತ್ಯಾಸ, ಕನಸು ಕಾಣಲು ಶ್ರಮವಿಲ್ಲದ ನಿದ್ದೆ ಬೇಕು, ನನಸು ಮಾಡಲು ನಿದ್ದೆಯಿಲ್ಲದ ಶ್ರಮ ಬೇಕು.

Share On

26

ನಮ್ಮ ಮನಸ್ಸು ಸ್ವಲ್ಪ ಪೆಟ್ಟು ಬಿದ್ದರೂ ಒಡೆಯುವ ಗಾಜಿನಂತೆ ಇಟ್ಟು ಕೊಳ್ಳಬಾರದು. ಅದು ಕಚ್ಛಾ ಜೇಡಿ ಮಣ್ಣಿನಂತೆ ಇಟ್ಟುಕೊಳ್ಳಬೇಕು, ಆಗ ಜೀವನದ ಪ್ರತೀ ಹೊಡೆತಕ್ಕೂ ಅದು ಆಕಾರ ಪಡೆಯುತ್ತಾ ಹೋಗುತ್ತದೆ.

Share On

27

ಜೀವನದಲ್ಲಿ ಆಸೆ ಪಡುವುದು ತಪ್ಪಲ್ಲ ನಮ್ಮ ಯೋಗ್ಯತೆಗೆ ತಕ್ಕಂತೆ ಆಸೆ ಪಡಬೇಕು ಅಷ್ಟೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಹಾಗೆಯೇ ಮನುಷ್ಯನಿಗೆ ನಂಬಿಕೆಯು ಕೂಡ ಅಷ್ಟೇ ಮುಖ್ಯ. ಬೇರು ಇಲ್ಲವಾದರೆ ಮರ ಉಳಿಯುವುದಿಲ್ಲ, ನಂಬಿಕೆ ಇಲ್ಲವಾದರೆ ಸಂಬಂಧಗಳು ಉಳಿಯುವುದಿಲ್ಲ,.

Share On

28

ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ. ಬಡತನದಲ್ಲಿ ಬೆಂದ ಹೆಣ್ಣು ಮಗಳು ತುಂಬಾ ಸ್ವಾಭಿಮಾನಿಯಾಗಿ ಬೆಳೆಯುತ್ತಾಳೆ. ಜೀವನವನ್ನು ಎಂದು ಹಗುರವಾಗಿ ಪರಿಗಣಿಸುವುದಿಲ್ಲ ... ಎಂಥ ಕಠಿಣ ಪರಿಸ್ಥಿತಿಯಲ್ಲೂ ಕುಗ್ಗದೆ ಎದುರಿಸಿ ನಿಲ್ಲುತ್ತಾಳೆ ಪ್ರತಿ ಪೈಸೆಗೂ ಬೆವರಿನ ಬೆಲೆ ಕಟ್ಟುತ್ತಾಳೆ...

Share On

29

ಮಾಡುವ ಪ್ರತಿ ಪಾಪವು ಸಾಲವಿದ್ದಂತೆ ಎಂದೋ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು. ಮಾಡುವ ಪ್ರತಿ ಒಳ್ಳೆಯ ಕೆಲಸ ಉಳಿತಾಯ ಖಾತೆಯಲ್ಲಿ ಜಮೆ ಮಾಡಿದಂತೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. “ದಾರಿ ತಪ್ಪಿದರೂ ಬಾಯಿ ತಪ್ಪಬಾರದು. ದಾರಿ ತಪ್ಪಿದರೆ ವಾಪಸ್ ಬಂದು ಸರಿ ದಾರಿಯಲ್ಲಿ ಹೋಗಬಹುದು. ಬಾಯಿ ತಪ್ಪಿ ವಚನ ಭ್ರಷ್ಟರಾದರೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ”.

Share On

30

ತಪ್ಪು ಮಾಡುವ ಸಂದರ್ಭ ದಿನಾಲೂ ಬರುತ್ತದೆ, ಆದರೆ ಒಳ್ಳೆಯದನ್ನು ಮಾಡುವ ಅವಕಾಶ ಒಮ್ಮೊಮ್ಮೆ ಬರುತ್ತದೆ ಆ ಅವಕಾಶವನ್ನು ಕಳೆದುಕೊಳ್ಳಬಾರದು. “ಎಲ್ಲಾರ ಜೀವನದಲ್ಲೂ ಒಬ್ಬ ಮನುಷ್ಯ ಸಿಗೋದು ಸಹಜ ಆದ್ರೆ, ಮನುಷ್ಯತ್ವ ಇರೋ ಮನುಷ್ಯ ಸಿಗೋದು ತುಂಬಾ ತುಂಬಾ ಕಷ್ಟ”.

Share On

31

ನಿಯತ್ತಾಗಿ ಇರುವವರು ಯಾವಾಗಲೂ ಗರ್ವದಿಂದ ಇರುತ್ತಾರೆ. ಅವರಿಗೆ ನಟಿಸಲು ಬರುವುದಿಲ್ಲ. ಅವರು ಯಾರ ಮುಂದೆಯೂ ತಲೆಭಾಗಿಸಲು ಬಯಸುವುದಿಲ್ಲ. ಈ ಸ್ವಭಾವದಿಂದ ಅವರು ಎಲ್ಲರ ಕಣ್ಣಿನಲ್ಲಿ ಕೆಟ್ಟವರಾಗಿರುತ್ತಾರೆ “ನಮ್ಮದೇ ಆದ ಒಂದು ನಿರ್ಧಾರ ಇರಬೇಕು ಅದುವೇ ಜೀವನ”.

Share On

32

ಖುಷಿ ಅನ್ನೋದು ಒಂದು ಸೂರ್ಯನ ಪ್ರತಿಬಿಂಬ ಇದ್ದಂಗೆ, ಕೆಲವೊಂದು ಸನ್ನಿವೇಶ ಮೋಡ ಕವಿದಂಗೆ ಆಗುತ್ತೆ, ಆದರೆ ಯಾವತ್ತೂ ಯಾರಿಗೂ ತೊಂದರೆ ಕೊಡಲ್ಲ. ಅದೇ ತರ ನಮ್ಮ ಜೀವನ ಆಗಿರಬೇಕು. ಕಷ್ಟಗಳು ಎದುರಾಗುವದು ನಮ್ಮ ದೌರ್ಬಲ್ಯವನ್ನು ಪ್ರದರ್ಶಿಸುವದಕಲ್ಲ, ನಮ್ಮ ಸಾಮರ್ಥ್ಯವನ್ನು ಪರೀಕ್ಷೇ ಮಾಡುವದಕ್ಕೆ.

Share On

33

ಹೂ ಎಂದಿಗೂ ಎರಡು ಬಾರಿ ಅರಳುವುದಿಲ್ಲ ಈ ಜನ್ಮ ಮತ್ತೆ ಮತ್ತೆ ಬರುವುದಿಲ್ಲ. ಜೀವನದಲ್ಲಿ ಸಾವಿರಾರು ಜನರು ಸಿಕ್ಕರೂ ಮನಸ್ಸಿಗೆ ಎಲ್ಲರೂ ಇಷ್ಟವಾಗುವುದಿಲ್ಲ, ಇಷ್ಟ ಆದವರನ್ನು ಒಮ್ಮೆ ಕಳೆದುಕೊಂಡರೆ, ಅಂತವರು ಮತ್ತೆ ಮತ್ತೆ ಸಿಗುವುದಿಲ್ಲ.

Share On

34

ಹೂವಿನಹಾರ ಎಲ್ಲರಿಗೂ ಕಾಣಿಸುತ್ತದೆ. ಆದರೆ, ಅದರ ಒಳಗಿರುವ ದಾರ ಯಾರ ಕಣ್ಣಿಗೂ ಕಾಣಿಸುವುದಿಲ್ಲ; ಹಾಗೆಯೇ, ನಮ್ಮ ಚಿಕ್ಕ ತಪ್ಪುಗಳು ಎಲ್ಲರ ಕಣ್ಣಿಗೂ ಕಾಣಿಸುತ್ತದೆ. ಆದರೆ, ನಮ್ಮೊಳಗೆ ಇರುವ ಒಳ್ಳೆಯತನ ಯಾರಿಗೂ ಕಾಣುವುದಿಲ್ಲ. ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದು ಜೀವನವಲ್ಲ, ಸಮಸ್ಯೆಗಳೊಂದಿಗೆ ಬದುಕುವುದೇ ನಿಜವಾದ ಜೀವನ.

Share On

35

ಅವಕಾಶ ಸಿಕ್ಕಿದೆ ಎಂದು ಯಾರಿಗೂ ಅವಮಾನ ಮಾಡಬೇಡಿ, ಸಮಯ ಒಂದೇ ರೀತಿ ಇರುವುದಿಲ್ಲ, ಸಮಯವು ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ. ಕೆಳಗೆ ಬಿದ್ದವನು ಮೇಲೆಳಲೇ ಬೇಕು. ಪರಸ್ಥಿತಿ ಏನೇ ಇರಲಿ, ಮುಖದಲ್ಲಿ ಒಂದು ಸಣ್ಣ ನಗುವಿರಲಿ.

Share On

36

ಮಾತಿನಿಂದ ನೋಯಿಸಿದವರನ್ನು ನೀವು ಲೆಕ್ಕಕ್ಕೆ ಇಟ್ಟುಕೊಳ್ಳಬೇಡಿ, ನಿಮ್ಮ ನೋವಿಗೆ ಧೈರ್ಯ ತುಂಬಿ ನಿಮ್ಮ ಜೊತೆ ಇರುವವರನ್ನು ನೀವು ಜೀವನ ಪೂರ್ತಿ ನಂಬಿ. ಪ್ರತಿಭೆ ಮತ್ತು ರೂಪ ದೇವರ ಕೊಡುಗೆ. ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ. ವ್ಯಕ್ತಿತ್ವ ಮತ್ತು ಅಹಂಕಾರ ನಾವೇ ರೂಪಿಸಿಕೊಂಡಿದ್ದು. ಆಲೋಚಿಸಿ ಮುಂದೆ ನಡಿಯಿರಿ.

Share On

37

ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ, ಕೇವಲ ಒಂದು ಹೆಜ್ಜೆ ಹಿಂದೆ ಇಟ್ಟು ಕಾದು ನೋಡು ನಿನ್ನನ್ನು ನೋವಿನಿಂದ ನರಳುವಂತೆ ಮಾಡಿದವರು, ಕ್ರಮೇಣ ತಮ್ಮನು ತಾವೇ ನೋವಿನಿಂದ ನರಳಿಸಿಕೊಳ್ಳುತ್ತಾರೆ, ನೀನು ಅದೃಷ್ಟಶಾಲಿಯಾದರೆ ಅದನ್ನೆಲ್ಲ ನೀನು ನೋಡುವೆ.

Share On

38

ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದು ಅಂತ ಭಾವಿಸಬಾರದು, ರಾತ್ರಿ ಕಳೆದು ಬೆಳಕು ಮೂಡುವ ರೀತಿಯಲ್ಲಿ ಒಳ್ಳೆಯ ದಿನಗಳು ಬಂದೆ ಬರುತ್ತವೆ, ತಾಳ್ಮೆ ಆತ್ಮ ವಿಶ್ವಾಸ ನಂಬಿಕೆ ಜೊತೆ ಇರಬೇಕು ಅಷ್ಟೇ.

Share On

39

ಮನೆಗಿಂತ ಬಾಗಿಲು ಚಿಕ್ಕದು, ಬಾಗಿಲಿಗಿಂತ ಬೀಗ ಚಿಕ್ಕದು, ಬೀಗಕ್ಕಿಂತ ಬೀಗದ ಕೀ ಚಿಕ್ಕದು, ಹೇಗೆ ಬೀಗದ ಕೀ ಯಿಂದ ದೊಡ್ಡ ಮನೆಯನ್ನು ಪ್ರವೇಶಿಸ ಬಲ್ಲೆವೊ, ಅದೇ ರೀತಿ ಒಂದು ಸಣ್ಣ,ಉತ್ತಮ ಆಲೋಚನೆಯಿಂದ ದೊಡ್ಡ ಸಮಸ್ಯೆಯನ್ನು ಬಗೆಹರಿಸಬಹುದು

Share On

40

✍️ಎಷ್ಟೆ ಕಷ್ಟಗಳಿರಲಿ ನಂಬಿಕೆ ಮಾತ್ರ ಕಳೆದುಕೊಳ್ಳಬೇಡಿ, ನಿಮ್ಮ ಸಹನೆ ನಿಮ್ಮ ಜೀವನಕ್ಕೆ ಒಳ್ಳೆಯ ದಾರಿ ಹುಡುಕಿಕೊಡುತ್ತದೆ. ಎಲ್ಲ ಕಷ್ಟಗಳೆಂಬ ಕತ್ತಲೆಯ ಹಿಂದೆ ಸುಖದ ಬೆಳಕು ಇದ್ದೆ ಇರುತ್ತದೆ. ಸಮಾಧಾನದಿಂದ ಹುಡುಕುವ ಪ್ರಯತ್ನ ಮಾಡಿ. ಈ ಜೀವನ ಸಹನೆಯ ಜೊತೆಗೆ ಸಾಗಲೇಬೇಕು. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ.✍️

Share On

41

ಒಂಟಿತನ ಅಂದ್ರೆ ಯಾರು ಇಲ್ಲದೇ ಇರೋದಲ್ಲ, ಎಲ್ಲರೂ ಇದ್ದರೂ ಯಾರೂ ಅರ್ಥ ಮಾಡಿಕೊಳ್ಳದೇ ಇರೋದೇ ನಿಜವಾದ ಒಂಟಿತನ. ಸಂಬಂಧಗಳು, ಜೀವಕ್ಕಿಂತ ಮುಖ್ಯ. ಸಂಬಂಧಗಳಲ್ಲಿ, ಜೀವವಿರುವುದು ಅದಕ್ಕಿಂತಲೂ ಮುಖ್ಯ.

Share On

42

ಯಾವುದೇ ಕೆಲಸ ಮಾಡಲು ಬೇಕಾಗಿರುವುದು ಬರೀ ಕೌಶಲ್ಯವಲ್ಲ. ಮಾಡಬೇಕು ಎಂಬ ಹಂಬಲ, ಮಾಡಿಯೇ ತೀರುವ ಮನೋಬಲ. ಜೀವನ ಇರುವವರಿಗೂ ಕಲಿಯುತ್ತಲೇ ಇರಿ. ಏಕಂದರೆ ಅನುಭವಕ್ಕಿಂತ ಉತ್ತಮ ಶಿಕ್ಷಣ ಮತ್ತೊಂದಿಲ್ಲ.

Share On

43

ಮನುಷ್ಯ ಎತ್ತರಕ್ಕೆ ಬೆಳೆದಂತೆ ಬಾಗುವುದನ್ನು ಕಲಿಯಬೇಕು, ಆಗಲೇ ಬದುಕು ಸುಂದರ.

Share On

44

ಯಾವುದೇ ಫಲಾಪೇಕ್ಷೆಯಿಲ್ಲದೆ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿ, ಸಾಧ್ಯವಾದಷ್ಟು ಒಳ್ಳೆಯನ್ನೆ ಮಾಡಿ, ಏಕೆಂದರೆ ಹೂ ಮಾರುವವರ ಕೈಯಲ್ಲಿ ಯಾವಾಗಲೂ ಹೂವಿನ ಸುವಾಸನೆ ಇರುತ್ತದೆ.

Share On

45

ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ, ಕೆಟ್ಟವರಲ್ಲೂ ಒಳ್ಳೆಯ ತನವನ್ನು ಕಾಣಬಹುದು. ಆದರೆ, ಕೆಟ್ಟ ಮನಸ್ಸಿನಿಂದ ಯೋಚಿಸಿದರೆ, ಒಳ್ಳಯವರಲ್ಲೂ ಕೆಟ್ಟದ್ದೇ ಕಾಣಿಸುತ್ತದೆ.

Share On

46

ಅತಿಯಾಗಿ ನೋವು ಅನುಭವಿಸಿದ ವ್ಯಕ್ತಿ ಯಾರೊಂದಿಗೂ ಬೆರೆಯುವುದಿಲ್ಲ. ಅತಿಯಾಗಿ ನಗುವ ವ್ಯಕ್ತಿ ಯಾರೊಂದಿಗೂ ನೋವನ್ನು ಹಂಚಿಕೊಳ್ಳುವುದಿಲ್ಲ.

Share On

47

ಸಮಯ ಒಳ್ಳೆದೇ ಆಗಲಿ ಕೆಟ್ಟದೆ ಆಗಲಿ ಒಂದು ಪಾಠವನ್ನು ಕಲಿಸೇ ಕಲಿಸುತ್ತದೆ. ಒಳ್ಳೆ ಸಮಯದಲ್ಲಿ ಎಲ್ಲರೂ ನಮ್ಮವರಾಗಿ, ಕೆಟ್ಟ ಸಮಯದಲ್ಲಿ ನಮ್ಮವರೇ ಬೇರೆಯವರಾಗಿ ಬದಲಾಗುತ್ತಾರೆ.

Share On

48

ಮದ್ಯಪಾನ ಮಾಡುವವನು ಕೇವಲ ಮದ್ಯವನ್ನು ಕುಡಿಯುವುದಿಲ್ಲ, ಅವನು ತನ್ನ ತಾಯಿಯ ಸಂತೋಷ, ಅವನ ಹೆಂಡತಿಯ ಶಾಂತಿ, ಅವನ ಮಕ್ಕಳ ಕನಸು, ಅವನು ತನ್ನ ತಂದೆಯ ಖ್ಯಾತಿಯನ್ನು ಒಂದೇ ಗುಟುಕಿನಲ್ಲಿ ಕುಡಿಯುತ್ತಾನೆ.

Share On

49

ಶರೀರಕ್ಕೆ ಸೇರಿದ ವಿಷದಿಂದಾಗಿ, ಒಬ್ಬ ವ್ಯಕ್ತಿ ಒಂದೇ ಸಾರಿ ಸಾಯುವನು. ಆದರೆ, ಕಿವಿಗೆ ಸೇರಿದ ಚಿಕ್ಕ ಚಿಕ್ಕ ವಿಷ ವಿಷಯಗಳನ್ನು ಮನಸಿನಲ್ಲಿಟ್ಟುಕೊಳ್ಳುವುದರಿಂದ, ದೊಡ್ಡ ದೊಡ್ಡ ಸಂಬಂಧಗಳು ದುರ್ಬಲಗೊಳ್ಳುವುದಲ್ಲದೆ, ಸಂಬಂಧಗಳನ್ನು ತೊರೆಯಲು ಆಗದೆ ನಿಭಾಯಿಸಲು ಸಾಧ್ಯವಾಗದೆ ವ್ಯಕ್ತಿ ಕ್ಷಣ ಕ್ಷಣಕ್ಕು ಸಾಯುತ್ತಾನೆ.

Share On

50

ಒಬ್ಬರ ಸರಳ ಸ್ವಭಾವ ಅವರ ಬಲಹೀನತೆ ಅಲ್ಲ, ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದೂ ಇಲ್ಲ, ಆದರೆ ಅದರ ರಭಸಕ್ಕೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ.

Share On

51

ಯಾವ ವ್ಯಕ್ತಿ ಸತ್ಯ, ನೀತಿ, ಪ್ರೀತಿ, ದಯೆ, ಕರುಣೆ, ತ್ಯಾಗ ಮತ್ತು ಸಂಯಮದ ಹಾದಿಯಲ್ಲಿ ನಡೆಯುತ್ತಾನೋ ಅವನು ಮಾತ್ರ ನೆಮ್ಮದಿಯ ಜೀವನ ನಡೆಸಬಹುದು. ಮೋಸ, ವಂಚನೆ, ಕಪಟ, ಸ್ವಾರ್ಥ, ಮದಮಸ್ಸರ, ಅತೀ-ಕಾಮಿಸ್ಟ ಮತ್ತು ಅಂಹಕಾರದ ಹಾದಿಯಲ್ಲಿ ನಡೆಯುವವನಿಂದ ಸಾಧ್ಯವಿಲ್ಲ.

Share On

52

ಕಣ್ಣು ತೆರೆದರೆ ಜನನ, ಕಣ್ಣು ಮುಚ್ಚಿದರೆ ಮರಣ, ಜನನ ಮರಣಗಳ ನಡುವೆ, ರೆಪ್ಪೆ ಆಡಿಸುತ್ತಿರುವುದೇ ಜೀವನ.

Share On

53

ಜೀವನದಲ್ಲಿ ಎಲ್ಲರಿಗೂ ಹಿನ್ನಡೆಯ ದಿನಗಳು ಇರುತ್ತವೆ. ಹಿನ್ನಡೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಜಗತ್ತಿಗೆ ಬೆಳಕು ಚೆಲ್ಲುವ ಸೂರ್ಯ ಚಂದ್ರರಿಗೂ ಗ್ರಹಣ ಹಿಡಿಯುತ್ತದೆ. ಕತ್ತಲು ಕವಿಯುತ್ತದೆ. ಗ್ರಹಣ ಬಿಟ್ಟ ನಂತರ ಸೂರ್ಯ ಚಂದ್ರ ಮತ್ತೆ ಪ್ರಜ್ಜಲಿಸುತ್ತಾರೆ ಅಂತೇ ನಮ್ಮ ಜೀವನ.

Share On

54

ಕತ್ತಲು ಕತ್ತಲೆಯನ್ನು ಎಂದು ಓಡಿಸಲಾಗದು ಅದಕ್ಕೆ ಬೆಳಕು ಬೇಕು.

Share On

55

ಸಂಬಂಧಗಳು ದೀಪದ ಎಣ್ಣೆಯಂತಿರಬೇಕು, ಯಾರು ಎಷ್ಟೇ ಬತ್ತಿಯಿಟ್ಟರೂ ಅದು ಬೆಳಗುತ್ತಿರಬೇಕು.

Share On

56

ನಾನು ಎಂಬುದ ಮರೆತು ನನ್ನಿಂದಲೇ ಎಂಬುದ ತೊರೆದು, ನಾವು ಎಂಬುದ ನೆನೆದು ನಮ್ಮಿಂದ ಎಂಬುದ ಮನಸಿಟ್ಟು, ಎಲ್ಲರೊಳಗೊಂದಾಗಿ ಬದುಕಿದರೆ ಅವನೇ ನಿಜವಾದ ಸಾಧಕ. ಅದುವೇ ಬದುಕಿನ ಸಾದನೆ.

Share On

57

ಮನಸ್ಸಿಟ್ಟು ಕಲಿತ ಅಕ್ಷರ, ಮೈ ಬಗ್ಗಿಸಿ ದುಡಿದು ತಿನ್ನುವ ಅನ್ನ, ಕಷ್ಟ ಪಟ್ಟು ಗಳಿಸಿದ ಸಂಪಾದನೆ, ಯಾವತ್ತೂ ಯಾರನ್ನು ಕೈ ಬಿಡುವುದಿಲ್ಲ.

Share On

58

ನಮಗೆ ಎಷ್ಟೇ ಜ್ಞಾನವಿದ್ದರೂ, ಕೆಲವೊಮ್ಮೆ ನಮ್ಮ ಲೆಕ್ಕಚಾರಗಳು ತಪ್ಪಿಬಿಡುತ್ತದೆ. ಯಾಕೆಂದರೆ ನಾವು ಕೂಡಿಸಿ ಗುಣಿಸುವಷ್ಟರಲ್ಲಿ, ಮೇಲಿರುವವನು ನಮ್ಮನ್ನೇ ಬಾಗಿಸಿ ಕಳೆದಿರುತ್ತಾನೆ.

Share On

59

ಬಹಳ ಒಳ್ಳೆಯವನಾದ್ರೆ ಹೆಚ್ಚು ಜನ ನಿನ್ನ ಪ್ರೀತಿಸ್ತಾರೆ ಅಂಡ್ಕೊಬೇಡ, ಹೆಚ್ಚು ಜನ ನಿನ್ನ ಬಳಸಿಕೊಳ್ತಾರೆ. ಅಷ್ಟೇ.

Share On

60

ಪ್ರಪಂಚದಲ್ಲಿ ಯಾವುದೇ ವಸ್ತು ಎಷ್ಟೇ ದುಬಾರಿ ಆಗಿರಬಹುದು.. ಆದರೆ ನಿದ್ರೆ, ನೆಮ್ಮದಿ ಹಾಗೂ ಸಂತೋಷಕ್ಕೆ ಇರುವಷ್ಟು ಬೆಲೆ ಯಾವ ವಸ್ತುವಿಗೂ ಇಲ್ಲ.

Share On

61

ಮೌನ ಕಲಿಸುವಷ್ಟು ಪಾಠ, ಮೌನ ಕೊಡುವಷ್ಟು ನೆಮ್ಮದಿ, ಮೌನದಿಂದ ಬರುವಷ್ಟು ತಾಳ್ಮೆ, ಯಾವುದರಲ್ಲೂ ಸೀಗುವುದಿಲ್ಲ.

Share On

62

ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ...!! ಪ್ರತಿಯಬ್ಬರಲ್ಲೂ ಒಂದಲ್ಲಾ ಒಂದು ಕೊರತೆ ಇರುತ್ತದೆ...!! ದಿನದಿಂದ ದಿನಕ್ಕೆ ಪರಿಪೂರ್ಣತೆಯ ಕಡೆಗೆ ಸಾಗುವುದೇ ಜೀವನ. ಸಾಗರದಷ್ಟು ಸಂಕಷ್ಟಗಳ ನಡುವೆಯೂ ಸುಖವಾಗಿ ಬದುಕುವಂತೆ ಮಾಡುವುದು ನಂಬಿಕೆ ಮತ್ತು ನೆಮ್ಮದಿ.

Share On

63

ಅದೃಷ್ಟದ ಬಗ್ಗೆ ಗೊತ್ತಿಲ್ಲ... ಆದರೆ ಕಷ್ಟಪಡುವವರಿಗೆ ಅವಕಾಶಗಳು ಖಂಡಿತವಾಗಿಯೂ ಸಿಗುತ್ತದೆ. ಅನುಭವ ಎನ್ನುವುದು ವಯಸ್ಸಿನಿಂದ ಬರುವುದಿಲ್ಲ ಅದು ಸಮಯ ಸಂದರ್ಭ ಪರಿಸ್ಥಿತಿಯನ್ನು ಎದುರಿಸುವುದರಿಂದ ಬರುತ್ತದೆ.

Share On

64

ಒಳ್ಳೆಯ ಮನಸ್ಸು ಇರೋರಿಗೆ ದುಃಖ ಜಾಸ್ತಿ. ಕನಿಕರ ಇರೋರಿಗೆ ಕಷ್ಟಗಳು ಜಾಸ್ತಿ. ಕಷ್ಟದ ಸಮಯದಲ್ಲಿ ದೇವರು ಏಕೆ ಸುಮ್ಮನಿದ್ದಾನೆ ಎಂದು ಚಿಂತಿಸಬೇಡಿ ಏಕೆಂದರೆ ಪಾಠ ಕಲಿಸಿದ ಶಿಕ್ಷಕರು ಕೂಡ ಪರೀಕ್ಷಾ ಕೊಠಡಿಯಲ್ಲಿ ಸುಮ್ಮನೆ ಇರುತ್ತಾರೆ.

Share On

65

ನಂಬಿ ಬದುಕುವುದು ಬೇರೆ, ನಂಬಿಸುತ್ತಾ ಬದುಕುವುದು ಬೇರೆ, ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತದೆ, ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತದೆ.

Share On

66

ಜ್ಞಾನವೆಂಬ ಸಂಪತ್ತು, ತಾಳ್ಮೆಯೆಂಬ ಆಯುಧ, ಜತೆಗೆ ನಗುವಿನಂಥ ಶಕ್ತಿವರ್ಧಕ ಹೊಂದಿದವರನ್ನು ಯಶಸ್ಸು ಎಲ್ಲಾ ದಿಕ್ಕುಗಳಿಂದ ಬಂದು ಸೇರುತ್ತದೆ.

Share On

67

ಸಿಗದವರನ್ನು ಹುಡುಕಬೇಡಿ, ಸಿಕ್ಕಿದವರನ್ನು ಬಿಡಬೇಡಿ, ಬರದವರನ್ನು ಕಾಯಬೇಡಿ, ಏನನ್ನು ಕೊಡದೆ ಇರುವವರನ್ನು ಕೇಳಬೇಡಿ, ಕೊಟ್ಟವರನ್ನು ಜೀವನದಲ್ಲಿ ಮರೆಯಬೇಡಿ.

Share On

68

ಸಿಕ್ಕಿದ್ದನ್ನು ಪಡೆದು ತೃಪ್ತಿಯಿಂದ ಬಾಳಬೇಕು, ಸಿಗದಿದ್ದನ್ನು ಮರೆತು ಖುಷಿಯಿಂದ ಬದುಕಬೇಕು, ಇಂದು ಸಿಕ್ಕಿದ್ದು ನಾಳೆ ಕೈ ಜಾರಿ ಹೋಗಬಹುದು, ಇಂದು ಸಿಗದಿದ್ದು ನಾಳೆ ಒಲಿಯಬಹುದು, ಯೋಗ ವಿದ್ದಂತೆ ಭೋಗವಿರುತ್ತದೆ.

Share On

69

ನಾವು ಒಬ್ಬರ ಬಗ್ಗೆ ಒಬ್ಬರು ಮಾತನಾಡುವುದಕ್ಕಿಂತ, ಒಬ್ಬರಿಗೊಬ್ಬರು ಮಾತನಾಡಿ ಕೊಂಡರೆ ನಮ್ಮ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದು.

Share On

70

ಬಡತನ ಮನುಷ್ಯನಿಗಿರಬೇಕು, ಮನಸ್ಸಿಗೆ ಇರಬಾರದು. ಅದೇ ಶ್ರೀಮಂತಿಕೆ ಮನಸ್ಸಿಗೆ ಇರಬೇಕು, ಮನುಷ್ಯನಿಗೆ ಇರಬಾರದು.

Share On

71

ಪ್ರತಿ 24 ಗಂಟೆಗೆ ದಿನ ಬದಲಾದರೇ 365 ದಿನಕ್ಕೊಮ್ಮೆ ವರುಷ ಬದಲಾಗುತ್ತೇ ಆದರೇ ಮನುಷ್ಯರು ಮಾತ್ರ ಅವಶ್ಯಕತೆಗೆ ತಕ್ಕಂತೆ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತಾರೆ.

Share On

72

ಪ್ರಪಂಚದಲ್ಲಿ ಪದಗಳು ಉಚಿತವಾಗಿಯೇ ಸಿಗುತ್ತವೆ. ಆದರೆ ಅವುಗಳನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಮೌಲ್ಯ ನಿರ್ಧಾರವಾಗುತ್ತದೆ.

Share On

73

ಸಂಪಾದನೆ ಎಂದರೆ ಕೇವಲ ಹಣವನ್ನು ಮಾತ್ರ ಸಂಪಾದಿಸುವುದಲ್ಲ. ಅನುಭವ, ಸಂಬಂಧ, ಗೌರವ, ಪ್ರೀತಿ ವಾತ್ಸಲ್ಯ ಇವೂ ಕೂಡ ಒಂದು ರೀತಿಯ ಸಂಪಾದನೆಯೇ...!ಆಗಿವೆ, ಹಣದ ಜೊತೆಗೆ ಇವು ಕೂಡ ತುಂಬಾನೇ ಮೌಲ್ಯಯುತವಾದ ಸಂಪಾದನೆಯಾಗಿದೆ.

Share On

74

ಖುಷಿ ಸಂತೋಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಅಕ್ಷಯ ಪಾತ್ರೆ ಅದು ಎಂದಿಗೂ ಬರಿದಾಗುವುದಿಲ್ಲ, ತನ್ನಲ್ಲಿರುವ ಖುಷಿಯನ್ನು ಇತರರೊಂದಿಗೆ ಹಂಚುವ ಮೂಲಕ ಇನ್ನೊಬ್ಬರ ಮೊಗದಲ್ಲಿ ಆ ಸಂತಸವನ್ನು ಕಾಣಬಹುದು.

Share On

75

ಎಷ್ಟು ತಾಳ್ಮೆಯಿಂದ ಇರುತ್ತೀವೋ ಅಷ್ಟು ಅಗ್ರಸ್ಥಾನ, ಎಷ್ಟು ದೂರ ಇರುತ್ತೀವೋ ಅಷ್ಟು ಗೌರವ, ಎಷ್ಟು ಕಡಿಮೆ ಆಸೆ ಪಡುತ್ತೀವೋ ಅಷ್ಟು ಪ್ರಶಾಂತತೆ, ಎಷ್ಟು ಕಡಿಮೆ ಮಾತನಾಡುತ್ತೀವೋ ಅಷ್ಟು ಬೆಲೆ.

Share On

76

ಸುರಿದು ಹೋದ ಮಳೆ, ಸರಿದು ಹೋದ ವೇಳೆ ಮತ್ತೆ ಸಿಗಲಾರದು, ಹಾಗೆಂದು ಅದರೊಳಗೆ ನಾವುಗಳು ಕಳೆದು ಹೋಗಲಾರೆವು. ಕೈ ಒಳಗಿರುವ ಕೈಗೆ ಸಿಗಲಾರದ ನಾಳೆಗಳ ಚಿಂತೆ ಬೇಡ, ಕಣ್ಣೆದುರಿಗಿರುವ ಈ ಕ್ಷಣಗಳಲ್ಲಿ ಬದುಕುವ ಸೊಗಸು ನಮ್ಮೊಳಗಿರಲ.

Share On

77

ತಪ್ಪುಗಳು, ಸೋಲುಗಳು, ಅವಮಾನಗಳು, ತಿರಸ್ಕಾರಗಳು ಇವುಗಳೆಲ್ಲವೂ ಉನ್ನತಿ ಮತ್ತು ಬೆಳವಣಿಗೆಯ ಭಾಗಗಳು. ಯಾವ ವ್ಯಕ್ತಿಯೂ ಈ ಅನುಭವಗಳಿಂದ ಹಾದು ಹೋಗದೆ ಜೀವನದಲ್ಲಿ ಗೌರವದ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

Share On

78

ಬದುಕೆಂಬುದು ಚಿತ್ರವೊಂದರ ರೇಖೇಗಳಂತೆ ಚಿತ್ರಕಾರನ ಕೖಯ್ಯಲ್ಲಿ ಅಳಿಸುವ ರಬ್ಬರ್ ಇರುತ್ತದೆ ಆದರೆ ಬದುಕಿನ ಚಿತ್ರಕಾರನ ಬಳಿ ಅದಿರುವುದಿಲ್ಲ ಆದರೆ ಯೋಚಿಸಿ ಕೆಲಸಮಾಡಬಹುದು!

Share On

79

ಅತಿಯಾಗಿ ಚಿಂತಿಸದಿರು, ಇನ್ನೊಬ್ಬರ ಬಾಳ ಪುಸ್ತಕದಲ್ಲಿ ನೀನೊಂದು ಅದ್ಯಾಯವಷ್ಟೇ, ಅರ್ಥವಾದರೂ ಆಗದೆ ಇದ್ದರೂ , ಇಷ್ಟವಾದರೂ ಆಗದೆ ಇದ್ದರೂ ಪುಟವನ್ನು ತಿರುಗಿಸಿಯೇ ತಿರುಗಿಸುವರ

Share On

80

ಉತ್ತಮವಾದ ಬದುಕು ಸಿಗುವುದು ಅಪರೂಪ, ಸಿಕ್ಕ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳುವುದು ಇನ್ನೂ ಕಠಿಣ.... ಕಷ್ಟವಾಗಲಿ ಸುಖ ವಿರಲಿ, ಇದ್ದ ಬದುಕನ್ನು ಪ್ರೀತಿಸೋಣ.

Share On

81

ಎತ್ತರಕ್ಕೆ ಏರಬಯಸುವ ವ್ಯಕ್ತಿ ಯಾವಾಗಲು ಏಣಿ ಕಟ್ಟುವ ಕಾರ್ಯದಲ್ಲಿ ನಿರತನಾಗಿರುತ್ತಾನೆ ವಿನಃ, ಇನ್ನೊಬ್ಬರ ಏಳ್ಗೆಗೆ ಕಲ್ಲು ಹಾಕುವುದರಲ್ಲಿ ಅಲ್ಲ.

Share On

82

ಅನುಮಾನ ತಪ್ಪಾಗಬಹುದು, ಅನುಭವ ಎಂದಿಗೂ ತಪ್ಪಾಗಲ್ಲಾ. ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆ, ಅನುಭವ ಜೀವನದಲ್ಲಿ ನಾವು ಕಲಿತ ಪಾಠ.

Share On

83

ಅದ್ಭುತ ಬದುಕನ್ನು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು, ಇನ್ನೊಂದು ಕಡೆ ನಂಬಿಕೆ ಇರಬೇಕು, ಕಷ್ಟಗಳು ಪಾಠ ಕಲಿಸಿದರೆ ನಂಬಿಕೆಗಳು ಶಕ್ತಿ ತುಂಬುತ್ತವೆ.

Share On

84

ಅದೃಷ್ಟವಂತ ಎಂದರೆ, ಅವಕಾಶಗಳ ಪಡೆವವನು, ಬುದ್ಧಿವಂತ ಎಂದರೆ, ಅವಕಾಶ ಸೃಷ್ಟಿಸಿಕೊಳುವವನು.

Share On

85

ಒಬ್ಬ ಮನುಷ್ಯನ ಬಗ್ಗೆ ಮತ್ತೊಬ್ಬ ಮನುಷ್ಯನಿಗೆ ಜೀವನ ಪರ್ಯಂತ ನೆನಪು ಇರುವುದು ಕೇವಲ ಎರಡೇ, ಎರಡು ವಿಷಯಗಳು. 1. ಕೈಯಿಂದ ಮಾಡಿದ ಸಹಾಯ. 2. ಮಾತಿನಿಂದ ಮನಸ್ಸಿಗೆ ಮಾಡಿದ ಗಾಯ.

Share On

86

ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡಿ ತಪ್ಪಿಲ್ಲದ ಕಡೆ ತಲೆ ತಗ್ಗಿಸಬೇಡಿ ಬೆಲೆ ಇಲ್ಲದ ಕಡೆ ಪ್ರೀತಿ ಬಯಸಬೇಡಿ

Share On

87

ಋಣ ಇದ್ದರೆ ಬೆಟ್ಟದ ತುದಿಯಲ್ಲಿರುವ ಹಣ್ಣು ಕೂಡ ನಮ್ಮ ಪಾಲಾಗುತ್ತದೆ, ಋಣ ಇಲ್ಲದೆ ಹೋದರೆ ಅಂಗೈಯಲ್ಲಿರುವ ಹಣ್ಣು ಕೂಡ ಜಾರಿ ಬಿದ್ದು ಅನ್ಯರ ಪಾಲಾಗುತ್ತೆ.

Share On

88

ಪರಿಸ್ಥಿತಿ ಕೆಟ್ಟರು ಮನಸ್ಥಿತಿ ಕೇಡಬಾರದು ಯಾಕೆಂದರೆ ಪರಿಸ್ಥಿತಿಯನ್ನು ಸರಿಪಡಿಸಬಹುದು ಆದರೆ ಮನಸ್ಥಿತಿಯನ್ನು ಸರಿ ಪಡಿಸಲು ತುಂಬಾನೇ ಕಷ್ಟ ಯಾರು ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಮನಸ್ಸು ಹಾಳು ಮಾಡಿಕೊಳ್ಳಬೇಡಿ.

Share On

89

ಸಮಯ ಮತ್ತು ಸಂದರ್ಭ ಎರಡಕ್ಕೂ ಇರುವ ವ್ಯತ್ಯಾಸ ಎಂದರೆ, ಸಮಯ ತುಂಬಾ ಜನರನ್ನು ಪರಿಚಯಿಸುತ್ತದೆ ಆದರೆ , ಸಂದರ್ಭ ಆ ಜನರ ನಿಜ ವಾದ ಮುಖವನ್ನು ಪರಿಚಯಿಸುತ್ತದೆ.

Share On

90

ಮನಸು ಎಂಬುದು ಅತ್ಯಂತ ಫಲವತ್ತಾದ ಜಾಗ ಅಲ್ಲಿ ನೀವು ಪ್ರೇಮ ,ದ್ವೇಷ, ಮತ್ಸರ, ಕರುಣೆ ಹೀಗೆ ಏನನ್ನೇ ಬಿತ್ತಿದರು ಸೋಂಪಾಗಿ ಬೆಳೆಯುತ್ತದೆ. ಆದರೆ ಅಲ್ಲಿ ಏನೇ ಬೆಳೆದರೂ ನಾವೇ ತಿನ್ನಬೇಕು ಎನ್ನುವುದು ಮಾತ್ರ ಕಡ್ಡಾಯ.

Share On

91

ತೊಂದರೆ ಬಂದಾಗ ಪ್ರಾಮಾಣಿಕವಾಗಿ, ಸಂಪತ್ತು ಬಂದಾಗ ಸರಳವಾಗಿ, ಅಧಿಕಾರ ಬಂದಾಗ ವಿನಯದಿಂದ ಮತ್ತು ಕೋಪ ಬಂದಾಗ ಶಾಂತವಾಗಿ ಇರುವವನೇ ಜೀವನದಲ್ಲಿ ಎತ್ತರಕ್ಕೆರುತ್ತಾನೆ. ಕಾಲ ಬದಲಾಗಿದೆ ಅನ್ನೋದು ತಪ್ಪು, ಕಾಲದಲ್ಲಿ ಬದುಕುವ ನಮ್ಮ ಮನಸ್ಥಿತಿಗಳು ಬದಲಾಗಿವೆ.

Share On

92

ಕಷ್ಟಗಳು ನಮಗೆ ವೇದನೆಯನ್ನು ಮಾತ್ರ ಕೊಡುತ್ತವೆ ಎಂದು ಭಾವಿಸಬಾರದು , ನಾವು ಕಷ್ಟದಲ್ಲಿದ್ದಾಗ ನಿಜವಾದ ಮಿತ್ರರು ಯಾರು , ಹಿತಚಿಂತಕರು ಯಾರು ಎಂಬುದು ಗೊತ್ತಾಗುತ್ತದೆ . ನಾವು ಯಾರನ್ನು ಆಪ್ತರು ಎಂದುಕೊಳ್ಳುತ್ತೇವೋ ಅವರು ನಮ್ಮ ಕಷ್ಟದಲ್ಲಿನಿಜ ಬಣ್ಣ ತ್ತೋರುತ್ತಾರೆ.

Share On

93

ಸಂಪತ್ತಿನ ಬೆಲೆಯೇ ಬೇರೆ... ಸಂಸ್ಕಾರದ ಬೆಲೆಯೇ ಬೇರೆ... ವ್ಯಕ್ತಿತ್ವವನ್ನು ಬಟ್ಟೆ ಅಥವಾ ಆಭರಣಗಳ ಸಂಪತ್ತಿನಿಂದ ಅಳೆಯಲು ಹೋಗಬೇಡಿ... ವ್ಯಕ್ತಿಗೆ ಗುಣವೇ ಸಂಪತ್ತು, ಸಂಸ್ಕಾರವೇ ಅವನ ಐಶ್ವರ್ಯ

Share On

94

ಕಾದ ಹಂಚಿನ ಮೇಲೆ ಹನಿ ನೀರು ಬಿದ್ದರೆ ಆರಿ ಹೊಗುತ್ತದೆ, ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ. ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ, ನಾವು ಯಾರ ಸಂಗ ಮಾಡುತ್ತೇವೋ ಅದರಂತೆ ನಾವಾಗುತ್ತೇವೆ.

Share On

95

ಯಾರು ಶ್ರೇಷ್ಠರು ಅಲ್ಲ , ಕನಿಷ್ಠರು ಅಲ್ಲ ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಶಿಷ್ಟ ಗಳಿರುತ್ತವೆ ಯಾರನ್ನು ಯಾರಿಗೂ ಹೋಲಿಸದೆ ಎಲ್ಲರನ್ನೂ ಗೌರವಿಸೋಣ.

Share On

96

ಕೈ ಕೈ ಜೋಡಿಸು, ಲೋಕವನ್ನು ಬದಲಾಯಿಸು

Share On

97

ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ, ಅನಿಸಿದ್ದೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ, ತಪ್ಪುಗಳೇ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ, ಕಣ್ಣೀರೇ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ, ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ.

Share On

98

ಛತ್ರಿಯು ಮಳೆಯನ್ನು ನಿಲ್ಲಿಸುವುದಿಲ್ಲ ಬದಲಿಗೆ ನಮಗೆ ಮಳೆಯಲ್ಲಿ ನಿಲ್ಲುವ ಧೈರ್ಯವನ್ನು ಕೊಡುತ್ತದೆ. ಹಾಗೆಯೇ, ಆತ್ಮವಿಶ್ವಾಸವು ನಮಗೆ ಯಶಸ್ಸನ್ನು ಕೊಡದಿದ್ದರು ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ.

Share On

99

ತೂತು ಬಿದ್ದ ದೋಣಿಯಲ್ಲಿ ನದಿ ದಾಟುವುದು ಒಂದೇ, ಮೋಸ ವಂಚನೆ ನಂಬಿಕೆ ಮತ್ತು ದ್ರೋಹ ಮಾಡುವಂತಹ ಸಮಯ ಸಾಧಕರ ಸ್ನೇಹ ಮಾಡುವದೂ ಒಂದೇ.

Share On

100

ಜಗತ್ತಿನಲ್ಲಿ ಅಗ್ಗದ ವಸ್ತುವೆಂದರೆ ಸಲಹೆ ಒಬ್ಬರನ್ನು ಕೇಳಿದರೆ ಸಾವಿರ ಜನ ನೀಡುತ್ತಾರೆ. ಜಗತ್ತಿನ ದುಬಾರಿ ವಸ್ತುವೆಂದರೆ ಸಹಾಯ ಸಾವಿರ ಜನರನ್ನು ಕೇಳಿದಾಗ, ಒಬ್ಬರು ಮಾಡುತ್ತಾರೆ.

Share On

101

ಮೂರು ಬಿಟ್ಟವರು ಊರಿಗೆ ದೊಡ್ಡವರು

Share On

102

ಒಂದು ಸಣ್ಣ ನಗು ಸ್ನೇಹವನ್ನು ಪ್ರಾರಂಭಿಸುತ್ತದೆ. ಒಂದು ಒಳ್ಳೆಯ ಮಾತು ದ್ವೇಷವನ್ನು ಕೊನೆಗೊಳಿಸುತ್ತದೆ. ಒಳ್ಳೆಯ ಮನಸ್ಸು ಸಂಬಂಧಗಳನ್ನು ಕಾಪಾಡುತ್ತದೆ. ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ.

Share On

103

ಸಂಪತ್ತು ಎಷ್ಟೇ ಇದ್ದರು ಸರಳತೆ ಮಾತ್ರ ಮನುಷನಿಗೆ ಬೆಲೆ ಕೊಡುತ್ತದೆ. ಏಕೆಂದರೆ ಸಂಪತ್ತಿಗೆ ಬೆಲೆ ಕಟ್ಟಬಹುದು ಆದರೆ ಸರಳತೆಗೆ ಬೆಲೆ ಕಟ್ಟಲಾಗುದಿಲ.

Share On

104

ಹೋಟೆಲ್ನಲ್ಲಿ ತಿನ್ಲಿಕ್ಕೆ ಹಣ ಬೇಕು ಅಮ್ಮನ ಕೈ ತುತ್ತು ತಿನ್ನಲು ಋಣ ಬೇಕು.

Share On

105

ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.

Share On

106

ಧೈರ್ಯವಿದ್ದವನಿಗೆ ದೈವವೂ ಅನುಕೂಲ

Share On

107

ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.

Share On

108

ಉತ್ತಮನು ಎತ್ತ ಹೋದರೂ ಶುಭವೇ

Share On

109

ಧನಾತ್ಮಕ ಮನಸ್ಸು ಎಲ್ಲದರಲ್ಲೂ ಅವಕಾಶವನ್ನು ಕಂಡುಕೊಳ್ಳುತ್ತದೆ. ಸಕಾರಾತ್ಮಕ ಮನಸ್ಸು ಎಲ್ಲದರಲ್ಲೂ ದೋಷವನ್ನು ಕಂಡುಕೊಳ್ಳುತ್ತದೆ.

Share On

110

ಎತ್ತರಕ್ಕೆ ಬೇಳಿಬೇಕು ನಿಜಾ..! ಅದಕ್ಕಾಗಿ ಮೆಟ್ಟಿಲುಗಳನ್ನು ತುಳಿಬೇಕೆ ಹೊರತು ಇನ್ನೊಬ್ಬರನ್ನು ತುಳಿದು ಅಲ್ಲ

Share On

111

ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹನ ಬಿಟ್ಟು ಹೋಗುತ್ತೆ. ಇನ್ನು ಮನುಷ್ಯರು ಯಾವ ಲೆಕ್ಕ.

Share On

112

ನೀವು ಹೋಗತ್ತಿರುವ ದಾರಿಯಲ್ಲಿ ಯಾವುದೇ ಅಡಚಣೆಗಳು ಎದುರಾಗದಿದ್ದಲ್ಲಿ ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ ಎಂದರ್ಥ

Share On

113

ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ

Share On

114

ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ

Share On

115

ಮನುಷ್ಯನು ಮುಹೂರ್ತ ಇಲ್ಲದೆ ಹುಟ್ಟುತ್ತಾನೆ ಮತ್ತು ಮುಹೂರ್ತ ಇಲ್ಲದೆ ಸಾಯುತ್ತಾನೆ. ಆದರೂ ಕೂಡ ಜೀವನ ಪರ್ಯತ ಶುಭ ಮುಹೂರ್ತದ ಹಿಂದೆ ಓಡುತ್ತಾ ಇರುತ್ತಾನೆ.

Share On

116

ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ.

Share On

117

ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.

Share On

118

ಊರೆಲ್ಲ ದೋಚಿಕೊಂಡು ಹೋದಮೇಲೆ ಕೋಟೆ ಬಾಗಿಲು ಹಾಕಿದರಂತೆ.

Share On

119

ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ

Share On

120

ಹರೆಯಕ್ಕೆ ಬಂದಾಗ ಹಂದಿನೂ ಚಂದ

Share On

121

ತನ್ನೂರಲ್ಲಿ ರಂಗ, ಪರೂರಲ್ಲಿ ಮಂಗ

Share On

122

ಹಗಲು ಅರಸನ ಕಾಟ ಇರುಳು ದೆವ್ವದ ಕಾಟ

Share On

123

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ

Share On

124

ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ

Share On

125

ಕಣ್ಣಿಗೆ ಕಾಡಿಗೆ ಹಾಕದ ಹೆಣ್ಣು ಸಪ್ಪಗೆ ಕಂಡಳು

Share On

126

ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.

Share On

127

ಚೆಲ್ಲಿಲ್ಲಿ ಮುಕ್ಕ ಎಲ್ಲಿದ್ದರೇನು ಮಾಡಿದ ರಾಗೀಲಿ ಕಲ್ಲಿದ್ದರೇನು

Share On

128

ಚಿನ್ನದಂಥ ಮಕ್ಕಳು ಹೆಣ್ಣಾದ್ರೇನು ಗಂಡಾದ್ರೇನು.

Share On

129

ಚಿಕ್ಕ ಮಡಿಕೆ ಚೊಕ್ಕ ಬೋಜನ

Share On

130

ಚಾಡಿಕೋರನಿಗೆ ಊರೆಲ್ಲ ನೆಂಟರು

Share On

131

ಚಪ್ಪರಕ್ಕೆ ಗತಿಯಿಲ್ಲದವ ಉಪ್ಪರಿಗೆಯನಪೇಕ್ಷಿಸಿದ

Share On

132

ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ

Share On

133

ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.

Share On

134

ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ

Share On

135

ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.

Share On

136

ಪುಣ್ಯ ಉಂಡು ತೀರಿತು, ಪಾಪ ತಿಂದು ತೀರಿತು

Share On

137

ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ

Share On

138

ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ

Share On

139

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ.

Share On

140

ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ

Share On

141

ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ

Share On

142

ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎಂದೂ ಅಳಬೇಡ.

Share On

143

ಚಿನ್ನ ತಿನ್ನಬೇಕಾದ್ರೆ ಮೇಣದಂತಾ ಹಲ್ಲು ಬೇಕು.

Share On

144

ಚಿತ್ತಾ ಮಳೆ ವಿಚಿತ್ರ ಬೆಳೆ!

Share On

145

ಚಿಕ್ಕ ಮೀನು ದೊಡ್ಡ ಮೀನು ನುಂಗಿತಂತೆ

Share On

146

ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ

Share On

147

ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು

Share On

148

ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ

Share On

149

ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ

Share On

150

ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು

Share On

151

ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ

Share On

152

ಚಿತ್ತಕ್ಕೆ ನಾನಾ ಕವಲು ಸತ್ಯಕ್ಕೆ ಒಂದೇ ಮಡಿಲು.

Share On

153

ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.

Share On

154

ಚರ್ಮ ತೊಳೆದರೆ ಕರ್ಮ ಹೋದೀತೆ

Share On

155

ಚರ್ಮ ತೊಳೆದರೆ ಕರ್ಮ ಹೋದೀತೆ

Share On

156

ಅಶ್ವಥ ಸುತ್ತಿದರೆ ಮಕ್ಕಳಾಗುತ್ತೆ ಅಂದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊಂಡಳಂತೆ.

Share On

157

ಆಕೆಗೆ ಬುದ್ಧಿ ಹೇಳಕ್ಕೆ ಸನ್ಯಾಸಿ ಕರೆಸಿದರೆ, ಆತ ಹೆಂಡ್ತಿನ ಬಿಟ್ಟು ಆರು ವರ್ಷ ಆಗಿತ್ತಂತೆ.

Share On

158

ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ?

Share On

159

ಅವರವರ ತಲೆಗೆ ಅವರವರದೇ ಕೈ

Share On

160

ಅಲ್ಪರ ಸಂಘ ಅಭಿಮಾನ ಭಂಗ

Share On

161

ರವಿ ಕಾಣದ್ದನ್ನು ಕವಿ ಕಂಡ

Share On

162

ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.

Share On

163

ವ್ರತ ಕೆಟ್ಟರೂ ಸುಖ ಪಡಬೇಕು

Share On

164

ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

Share On

165

ರಸ ಬೆಳೆದು ಕಸ ತಿನ್ನಬೇಡ, ಹಸು ಕಟ್ಟಿ ಮೊಸರಿಗೆ ಪರದಾಡಬೇಡ

Share On

166

ಯೋಗಿ ತಂದದ್ದು ಯೋಗಿಗೆ ಭೋಗಿ ತಂದದ್ದು ಭೋಗಿಗೆ

Share On

167

ಬಾವಿಯ ಬಾಯನ್ನು ಮುಚ್ಚಬಹುದು ಜನಗಳ ಬಾಯನ್ನಲ್ಲ

Share On

168

ಬಾಲ್ಯವಿಲ್ಲದೆ ಯೌವ್ವನವಿಲ್ಲ ಯೌವ್ವನವಿಲ್ಲದೆ ಮುಪ್ಪಿಲ್ಲ

Share On

169

ಬಸವನ ಹಿಂದೆ ಬಾಲ ಲಗ್ನದ ಹಿಂದೆ ಸಾಲ.

Share On

170

ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ

Share On

171

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

Share On

172

ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು

Share On

173

ನಡೆದಷ್ಟು ನೆಲ, ಪಡೆದಷ್ಟು ಫಲ.

Share On

174

ಕಡು ಕೋಪ ಬಂದಾಗ ತಡಕೊಂಡವನೇ ಜಾಣ

Share On

175

ಕಜ್ಜಿ ಹೋದರೂ ಕಡಿತ ಹೋಗಲಿಲ್ಲ

Share On

176

ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ

Share On

177

ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.

Share On

178

ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.

Share On

179

ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ

Share On

180

ಆಕಾಶ ನೋಡೋಕೆ ನೂಕಾಟವೇಕೆ?

Share On

181

ನಾನು ನನಗೆ ದೇವರು ಯೆಲ್ಲಾರಿಗೆ

Share On

182

ಅರ್ಧ ಕಲಿತವನ ಆಬ್ಬರ ಹೆಚ್ಚು.

Share On

183

ಬೇಲಿನೆ ಯೆದ್ದು ಹೊಲ ಮೇಯ್ದಾಂತೆ

Share On

184

ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು.

Share On

185

ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.

Share On

186

ಮನೆಯಲ್ಲಿ ಇಲಿ ಬೀದಿಯಲ್ಲಿ ಹುಲಿ

Share On

187

ಅಡುಗೆ ಮಾಡಿದವ್ಲಿಗಿಂತ ಬಡಿಸಿದವಳೆ ಮೆಲೂ

Share On

188

ಕುರಿ ಕಾಯೊದಕ್ಕೆ ತೋಳ ಕಳುಹಿಸಿದಂತೆ

Share On

189

ಶುಭ ನುಡಿಯೋ ಸೋಮಾ ಅಂದರೆ ಗೂಬೆ ಕಾಂಣ್ನತಿದೇಯಲ್ಲೊ ಮಾಮ ಅಂದ ಹಾಗೆ

Share On

190

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ

Share On

191

ನಾನು ನನಗೆ ದೇವರು ಎಲ್ಲಾರಿಗೆ

Share On

192

ಕೋಪದಲ್ಲಿ ಕೊಯ್ದುಕೊಂಡ ಮುಗೂ ಶಾಂತಾವಾದಗ ಮೆಲೆ ಬಾರದು

Share On

193

ಹೊಸ ವೈದ್ಯನಿಗಿಂತ ಹಳೆ ರೋಗಿನೆ ವಾಸಿ

Share On

194

ಆಕಳು ಕಾಪ್ಪದರೆ ಹಾಲು ಕಾಪ್ಪೆ?

Share On

195

ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ

Share On

196

ಕತ್ತೆಗೇನು ಗೊತ್ತು ಕಸ್ತುರಿ ವಾಸಾನೆ

Share On

197

ಮೊದಲು ಆಳಾಗಿ ದುಡಿ ನಂತರ ಅರಸನಾಗೀ ಉಣು

Share On

198

ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರುಷ ಆಯಸ್ಸು

Share On

199

ಅತಿಯಾದರೆ ಅಮೃತವೂ ವಿಷ

Share On

200

ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದ

Share On

201

ಸಹಾಯ ಚಿಕ್ಕಾದದರು ಪರವಾಗಿಲ್ಲ ಮನಸ್ಸು ದೊಡ್ಡದಗಿದರೆ ಆಸ್ಟೆ ಸಾಕು

Share On

202

ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದ

Share On

203

ರಾತ್ರಿ ನೋಡಿದ ಬಾವಿಗೆ ಹಗಲಿಗೆ ಹೊಗಿ ಬೀಳಬಾರದು

Share On

204

ಹಲ್ಲು ಇದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲಿಲ್ಲ

Share On

205

ಕೋತಿ ತಾನು ಕೆಡೋದಲ್ಲದೆ ವನನೆಲ್ಲ ಕೆಡುಸ್ತು

Share On

206

ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ

Share On

207

ಎರಡು ಕೈ ಸೇರಿದ್ರೇನೆ ಚಪ್ಪಾಳೆ

Share On

208

ಹುಟ್ಟು ಗುಣ ಸುಟ್ಟರೂ ಹೋಗೋಲ್ಲ

Share On

209

ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ

Share On

210

ಬಡವರ ಮನೆ ಊಟ ಚೆನ್ನ ದೊಡ್ಡವರ ಮನೆ ನೋಟ ಚೆನ್ನ

Share On

211

ಹಾಸಿಗೆ ಇದ್ದಸ್ಟ್ ಕಾಲು ಚಾಚು

Share On

212

ಸಂಕಟ ಬಂದಾಗ ವೆಂಕಟರಮಣ

Share On

213

ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರುವುದಿಲ್ಲ

Share On

214

ಕಣ್ಣಾರೆ ಕಂಡರೂ ಪರಿಶೀಲಿಸಿ ನೋಡಬೇಕು

Share On

215

ಹಣ ಇರುವ ಗಂಡನ ಕೈ ಹಿಡಿದರು ಋಣ ಇರುವಸ್ಟೆ ಪ್ರಾಪ್ತೀ

Share On

216

ತಾಯಿಯಂತೆ ಮಗಳು ನೂಲಿನಂತೆ ಸೀರೆ

Share On

217

ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಎಳೆಯಿತು

Share On

218

ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ

Share On

219

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

Share On

220

ತುಂಬಿದ ಕೊಡ ತುಳುಕುವುದಿಲ್ಲ

Share On

221

ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ

Share On

222

ಊರಿಗೆ ಅರಸನಾದರು ತಾಯಿಗೆ ಮಗ

Share On

223

ಯಾರದ್ದೊ ದುಡ್ಡು ಯೆಲ್ಲಾಮನ ಜಾತ್ರೆ

Share On

224

ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು

Share On

225

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

Share On

226

ದುಬ್ಲಿಕಾಯೆನ್ ಶಿಕೊವ್ಚೆ ಲಿಸಾವ್ ಕಾಂಚೆಯ್ ಇಸ್ಕೊಲ್ಲಾಂತ್ ಶಿಕೊಂಕ್ ಮೆಳನಾ.

Share On

227

ಅತಿ ಆಸೆ ಗತಿ ಕೆಡು

Share On

228

ಅತಿ ಆಸೆ ಗತಿ ಕೆಡು

Share On

229

ಕಾಲು ಜಾರಿದರೆ ಆನೆನೂ ಬಿಳುತ್ತೆ.

Share On

230

ನಗುವೇ ಸಿದ್ಧಔಷದ

Share On

231

ಉಪ್ಪಿಗಿಂತ ರುಚಿ ಇಲ್ಲ ಪ್ರಿತಿಗಿಂತ ಭಂದು ಇಲ್ಲ

Share On

232

ಆರೊಗ್ಯಾವೇ ಭಾಗ್ಯಾ

Share On

233

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ

Share On

234

ಉಪ್ಪು ತಿಂದವ ನೀರು ಕುಡಿಯಲೇ ಬೇಕು

Share On

235

ಮೂರ್ತಿ ಚಿಕ್ಕದು ಕೀರ್ತಿ ದೊಡ್ಡದು

Share On

236

ಜಡ್ ಆಸ್ತಾನಾ ಬಗನಾ ಜಾಲ್ಯಾರ್ ರುಕ್ ಜಾವ್ನ್ ಬಗೊಂವ್ಕ್ ಸದ್ಯವೇ ?

Share On

237

ಕಂಡೊ ಖತ್ಯಲ್ಯಾಕ್ ಉಂಡ್ಯಾಚೀ ರುಸ್ ಕಶೆ ಗೋತ್ತ್.

Share On

238

ಕೈ ಕೆಸಾರದರೆ ಬೈ ಮೋಸರು

Share On